ಅವರು ಉಡುಪಿಯ ಗೋವಿಂದ ಪೈ ಸಂಶೋಧನ ಕೇಂದ್ರದಿಂದ ಪಿಎಚ್.ಡಿ ಪದವಿ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಪ್ರಮುಖ ರಾಷ್ಟ್ರಮಟ್ಟದ ಕಮ್ಮಟಗಳು,ವಿಚಾರಸಂಕಿರಣಗಳು ಹಾಗು ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಇವರು ಬೇರೆ ಬೇರೆ ಸಂದರ್ಭದಲ್ಲಿ ೨೫ ಕ್ಕಿಂತಲೂ ಹೆಚ್ಚು ಲೇಖನಗಳನ್ನು ಪ್ರಕಟಿಸಿದ್ದಾರೆ. == ಶಿಕ್ಷಣ == ಎಂ.ಎ : ಕನ್ನಡ ಸಾಹಿತ್ಯ,ಮಂಗಳೂರು ವಿಶ್ವವಿದ್ಯಾನಿಲಯ ೧೯೯೧ ಪಿ.ಎಚ್.ಡಿ. ಪದವಿ : ೧೯೯೮ ಯು.ಜಿ.ಸಿ. ಉಪನ್ಯಾಸಕ ಅರ್ಹತಾ ಪರೀಕ್ಷೆ : ಯು.ಜಿ.ಸಿ. ನವದೆಹಲಿ ತೇರ್ಗಡೆ,೧೯೯೨ ಸಂಶೋಧನಾ ವಿಷಯ : ದಕ್ಷಿಣ ಕನ್ನಡ ಜಿಲ್ಲೆಯ ಶಾಸನಗಳ ಸಾಂಸ್ಕ್ರತಿಕ ಅಧ್ಯಯನ ಪದವಿ ನೀಡಿದ ವಿಶ್ವವಿದ್ಯಾಲಯ : ಮಂಗಳೂರು ವಿಶ್ವವಿದ್ಯಾಲಯ == ಇತರ ಮಾಹಿತಿಗಳು == ಪ್ರಥಮ ಬಹುಮಾನ(ಲಲಿತಾ ರೈ ಮತ್ತು ಪದ್ಮಾ ಶೆಣೈ ದತ್ತಿನಿಧಿ)-ಎಂ.ಎಸ್.ವೇದಾ ಅವರ 'ಕಪ್ಪು ಕಿವಿಯ ಬಿಳಿಯ ಕುದುರೆಗಳು' ಕಾದಂಬರಿಯ ಕುರಿತ ವಿಮರ್ಶಾ ಲೇಖನ-೨೦೧೨ ಸಹನಿರ್ದೇಶಕಿ,ಉಳ್ಳಾಲದ ರಾಣಿ ಅಬ್ಬಕ್ಕಳ ಕುರಿತು ಸಾಕ್ಷ್ಯಚಿತ್ರ -೨೦೧೨ ಕಾರ್ಯದರ್ಶಿ,ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.)ಮಂಗಳೂರು;೨೦೧೧-೨೦೧೩ ಪ್ರಸ್ತುತ ಕರಾವಳಿ ಲೇಖಕಿಯರ-ವಾಚಕಿಯರ ಸಂಘ(ರಿ.)ಮಂಗಳೂರು-ಇದರ ಅಧ್ಯಕ್ಷೆ;೨೦೧೫ರಿಂದ ಯುವಜನೋತ್ಸವ-೨೦೧೩ ಲಘು ಶಾಸ್ತ್ರೀಯ ಸಂಗೀತ ಸ್ವರ್ಧೆಯ ತೀರ್ಪುಗಾರರಲ್ಲಿ ಒಬ್ಬರು. ಯೋಜನಾ ಸಹಾಯಕಿಯಾಗಿ-೩ವರ್ಷಗಳು (ಯುಜಿಸಿ ಪ್ರಧಾನ ಸಂಶೋಧನಾ ಯೋಜನೆ, ಕನ್ನಡ ವಿಭಾಗ, ಮಂಗಳೂರು ವಿಶ್ವವಿದ್ಯಾನಿಲಯ; ೨೦೦೪-೨೦೦೮ ಬೆಂಗಳೂರಿನ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸುವರ್ಣ ಮಹೋತ್ಸವ ಆಚರಣೆಯ ಭಾಗವಾಗಿ ಪ್ರಕಟಗೊಳ್ಳಲಿರುವ ಅಕಾಡೆಮಿ ಪ್ರಕಟಣೆಗಳ 'ಪರಿಣಾಮ ಅಧ್ಯಯನ'ದ ಲೇಖಕರಲ್ಲಿ ಒಬ್ಬರು. == ಪ್ರಕಟಣೆಗಳು == === ಸ್ವತಂತ್ರ ಕೃತಿಗಳು === ತುಳುನಾಡಿನ ಶಾಸನಗಳ ಸಾಂಸ್ಕೃತಿಕ ಅಧ್ಯಯನ;೨೦೦೨(ಪಿ.ಎಚ್.ಡಿ ಸಂಶೋಧನ ಮಹಾಪ್ರಬಂಧದ ಗ್ರಂಥರೂಪ) ಶಿವರಾಮ ಕಾರಂತ :ವ್ಯಕ್ತಿ-ಅಭಿವ್ಯಕ್ತಿ; ೨೦೧೦(ಶಿವರಾಮ ಕಾರಂತ ಬದುಕು-ಬರಹಗಳ ಕುರಿತ ವಿಮರ್ಶಾ ಲೇಖನಗಳು) ಮಹಿಳೆ:ನೆಲೆ-ಬೆಲೆ; ೨೦೧೦(ಮಹಿಳಾಸಂಬಂಧಿ ವಿಮರ್ಶಾ ಲೇಖನಗಳು ) ಕೈಗನ್ನಡಿ; ೨೦೧೨(ಕನ್ನಡ ಸಾಹಿತ್ಯಸಂಬಂಧಿ ವಿಮರ್ಶಾ ಲೇಖನಗಳು) ಪ್ರಾದೇಶಿಕತೆಯೂ ಕಲ್ಲು ಹೇಳಿದ ಕಥೆಗಳೂ;೨೦೧೨(ಶಾಸನಾಧಾರಿತ ಲೇಖನಗಳು) ಎ.ಪಿ.ಮಾಲತಿ ಅವರ ಬದುಕು-ಬರಹಗಳ ಕುರಿತು ಕೃತಿ ಪ್ರಕಟಣೆ === ಸಂಪಾದಿತ ಕೃತಿಗಳು === ಅಬ್ಬಕ್ಕ ಸಂಕಥನ ೨೦೧೧ (ಉಳ್ಳಾಲ ರಾಣಿ ಅಬ್ಬಕ್ಕರ ಕುರಿತ ವಿಚಾರಸಂಕಿರಣದಲ್ಲಿ ಮಂಡಿತವಾದ ಪ್ರಬಂಧಗಳು) ಶಿವರಾಮ ಕಾರಂತರ ಕಾದಂಬರಿಗಳ ಸಾಂಸ್ಕೃತಿಕ ಪ್ರಾದೇಶಿಕ ಪದಕೋಶ ೨೦೧೨ (ಶಿವರಾಮ ಕಾರಂತರ ಕಾದಂಬಗಳನಾಧರಿಸಿ) ಬೆಳ್ಳಿಬೆಡಗು ೨೦೧೫ (ಕರಾವಳಿಯ ಲೇಖಕಿಯರ-ವಾಚಕಿಯರ ಸಂಘ(ರಿ.)ದ ಬೆಳ್ಳಿಹಬ್ಬದ ಸ್ಮರಣ ಸಂಚಿಕೆ) == ಉಲ್ಲೇಖ ==